Saturday, October 2, 2010

ಪರಿಚಯ

ಶ್ರೀ ಗಣೇಶಾಯ ನಮಃ

ಮಲೆನಾಡಿನ ಒಂದು ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ಇಷ್ಟು ದಿನ ಅದೇ ಪರಿಸರದಲ್ಲಿ ಬೇಕಾದ್ದು ಬೇಡಾದ್ದು ಎಲ್ಲ ಕಲಿತು, ನಾನೇಕೆ ಇಲ್ಲಿ  ಬಂದಿರುವೆ ಎಂಬ ಸ್ಪಷ್ಟ ಕಲ್ಪನೆಯೂ ಇಲ್ಲದೇ, ನಮ್ಮವರನ್ನೆಲ್ಲ ಬಿಟ್ಟು ಬೆಂಗಳೂರೆಂಬ ಮಾಯಾನಗರಿಗೆ ಪ್ರಥಮ ಬಾರಿಗೆ ಬಂದಿಳಿದಿದ್ದೇನೆ. ಮುಂದಿನದನ್ನು ನನ್ನ ನೆಚ್ಚಿನ ದೇವರು ಗಣೆಶನಿಗೆ ಬಿಟ್ಟಿದ್ದೇನೆ. "ಜೈ ಗಣೇಶ"

ಚಿಕ್ಕಂದಿನಿಂದಲೂ ಓದುವುದು, ಬರೆಯುವುದು ಅಂದರೆ ಆಸಕ್ತಿ, ನನ್ನ ಗೆಳತಿಯೊಬ್ಬಳ ಮಾರ್ಗದರ್ಶನದಂತೆ, ಇನ್ಮುಂದೆ ಈ ಬ್ಲಾಗ್  ನಲ್ಲಿ ನನ್ನ ಚರಿತೆ ಬರೆಯಲು ಆರಂಭಿಸುವೆ. ಇಂಟರ್ನೆಟ್ ನಲ್ಲಿ ಕನ್ನಡ ಬ್ಲಾಗ್ ಗಳ ಪಟ್ಟಿ ನೋಡಿ ಒಮ್ಮೆಲೇ ಸಂತೋಷ, ಆಶ್ಚರ್ಯ ಗಳಾದವು. ಓದಲಿಕ್ಕೆ ಎಷ್ಟೊಂದು ವಿಷಯಗಳಿವೆ ಅನ್ನಿಸಿತು. ನಿಮ್ಮೆಲ್ಲರ ಬರಹಗಳನ್ನು ಓದಿ ಸುಮ್ಮನೆ ಕೂರಲಾಗುತ್ತಿಲ್ಲ, ಕೆಲದಿನದಿಂದ ಕನ್ನಡ ಟೈಪಿಂಗ್ ಕಲಿತು, ನನ್ನದೊಂದು ಇ ಮೈಲ್ ಐಡಿ ಓಪನ್ ಮಾಡಿ, ಈ ಬ್ಲಾಗ್ ಆರಂಭಿಸಿದ್ದೇನೆ.

ಈ ಬ್ಲಾಗ್ ಗಳ ಸಾಗರದಲ್ಲಿ, "ಚರಿಚರಿತಾ"ಗೆ ತಮ್ಮೆಲ್ಲರ ಒಂದು ಬಿಂದುವಿನಷ್ಟು ಪ್ರೀತಿಯ ನೀರೀಕ್ಷೆಯಲ್ಲಿ

ಚರಿತಾ.

7 comments:

  1. ಬ್ಲಾಗ್ ಲೋಕಕ್ಕೆ ನಿಮಗೆ ಸ್ವಾಗತ ಚರಿತಾ ಭಟ್ ಅವರೆ. ಉತ್ತಮ ಲೇಖಕರು, ಭಾವ ಜೀವಿಗಳು, ಬುಧ್ಧಿ ಜೀವಿಗಳ ಮತ್ತು ಉತ್ತಮ ಸ್ನೇಹಿತರ ಮಹಾಪೂರವೇ ಈ ಲೋಕದಲ್ಲಿದೆ. ನಿಮ್ಮ ಅ೦ಕಣಗಳನ್ನು ಕುತೂಹಲದಿ೦ದ ಕಾಯುತ್ತೇವೆ.

    ಶುಭಾಶಯಗಳು
    ಅನ೦ತ್

    ReplyDelete
  2. ಅನಂತರಾಜ್ ಅವರೇ, ಆತ್ಮೀಯ ಸ್ವಾಗತಕ್ಕೆ ಧನ್ಯವಾದಗಳು.

    ReplyDelete
  3. ಮಲೆನಾಡ ಬರಹಗಾರ್ತಿಯರ ಪಟ್ಟಿಗೆ ಮತ್ತೊಂದು ಹೊಸ ಸೇರ್ಪಡೆ. :-)

    ReplyDelete
  4. ಬ್ಲಾಗ್ ಲೋಕಕ್ಕೆ ಸ್ವಾಗತ.. All the best..

    ReplyDelete
  5. "ಬೆಂಗಳೂರು ಮಹಾನಗರ ಪಾಲಿಕೆ"ಗೆ ಮತ್ತು "ಕನ್ನಡ ಬ್ಲಾಗ್ ಲೋಕ"ಕ್ಕೆ ಸ್ವಾಗತ.
    ಚರಿತಾ, ನೀವು
    ಹೋಗಿ ಬರಿತಾ
    ನಾವು ಬರ್ತೇವೆ ಓದುತ್ತಾ ಓದುತ್ತಾ
    ಒಳ್ಳೆಯದಾಗಲಿ. . . .
    once again Well Come

    ReplyDelete
  6. ಬ್ಲಾಗ್ ಲೋಕಕ್ಕೆ ನಿಮಗೆ ಸ್ವಾಗತ. ಉತ್ತಮ ಲೇಖಕರು, ಭಾವ ಜೀವಿಗಳು, ಬುಧ್ಧಿ ಜೀವಿಗಳ ಮತ್ತು ಉತ್ತಮ ಸ್ನೇಹಿತರ ಮಹಾಪೂರವೇ ಈ ಲೋಕದಲ್ಲಿದೆ. ನಿಮ್ಮ ಅ೦ಕಣಗಳನ್ನು ಕುತೂಹಲದಿ೦ದ ಕಾಯುತ್ತೇವೆ.

    ಬ್ಲಾಗಿಂಗ್ ಒಂದು ಒಳ್ಳೆಯ ಹವ್ಯಾಸ..ನಮ್ಮ ಅರಿವಿನ ಪರಿಧಿ ವಿಸ್ತಾರ ಆಗುವುದಂತೂ ನಿಜ.

    ReplyDelete
  7. WELL COME 2U & U R PEN

    ReplyDelete